ಪ್ರಕೃತಿಯ ವಿಕೋಪ ಕ್ಕೆ ಬಲಿಯಾಗುತ್ತಿರುವ ಮಾನವ ಪ್ರಕೃತಿಯ ಒಂದು ಅಂಗ. ಬುದ್ದಿವಂತಿಕೆಯ ಆದಾರದ ಮೇಲೆ ಮಾನವನನ್ನು ಉಳಿದ ಪ್ರಾಣಿಗಳಿಗಿಂತ ಮೇಲೆಂದು ಪರಿಗಣಿಸಲಾಗಿದೆ. ಮಾನವ ಮೊದಲಿನಿಂದಲೂ ಪ್ರಕೃತಿಯ ಆರಾಧಕ. ದೇವರನ್ನು ಕಾಣುವ ಮೊದಲು ಪ್ರಕೃತಿಯಲ್ಲೇ ದೇವರನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದಾನೆ. ಆ ನಿಟ್ಟಿನಲ್ಲಿ ಸೂರ್ಯ, ಚಂದ್ರ, ಗ್ರಹ, ವಾರ, ನಕ್ಷತ್ರಗಳು ಅವನ ಆಚರಣೆಗೆ ಒಳಪಟ್ಟಿವೆ. ಆದರೂ ಈಗಿನ ಮಾನವನು ಪ್ರಕೃತಿಯನ್ನು ಅವಲಂಬಿಸದೆ ಕೃತಕ ವಸ್ತುಗಳ ಗುಲಾಮನಾಗಿದ್ದಾನೆ. ಹಾಗೆಯೇ ಪ್ರಕ್ರತಿಗೂ ಕಂಟಕನಾಗಿದ್ದಾನೆ. ಆದರೆ ಮಾನವನು ಪ್ರಕೃತಿಯನ್ನು ಬಿಟ್ಟು ತನ್ನದೇ ಆದ ಕೃತಕ ವಸ್ತುಗಳನ್ನು ತಯಾರಿಸಿ ಉಪಯೋಗಿಸುತ್ತಾನೆ. ತಾನು ಉತ್ಪಾದಿಸಿದ ವಸ್ತು ಪರಿಸರಕ್ಕೆ ಹಾನಿಯೇ ಹಿತಕರವೇ ಎಂದು ಯೋಚಿಸದೆ ಉತ್ಪಾದಿಸುತ್ತಾನೆ. ಪ್ರಕೃತಿ ವಿಕೋಪವು ಪ್ರಕೃತಿಯಲ್ಲಾಗುತ್ತಿರುವ ಎದಲಾವಣೆ ಹಾಗೂ ಕೋಲಾಹಲ. ಪ್ರಕೃತಿ ವಿಕೋಪಕ್ಕೆ ಪ್ರಮುಖ ಕಾರಣ ಮಾನವ. ಅದರಲ್ಲೂ ಮಾನವನ ಮೂಲಕ ಸಂಕಷ್ಟತoದ್ದೊಡ್ಡು ತ್ತಿರುವ ತಂತ್ರಜ್ಞಾನ. == ಪ್ರಕೃತಿಯ ವಿಕೋಪಕ್ಕೆ ಕಾರಣಗಳು == ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಹೆಣ್ನು ಸಹನೆಗೆ ಪ್ರತಿಬಿಂಬ. ಆದರೆ ಯಾವಾಗ ಮನುಷ್ಯನು ಸಹನೆಯ ಮಿತಿಯನ್ನು ಮೀರಿ ವರ್ತಿಸುವನೋ, ಆ ಸಂದರ್ಭದಲ್ಲಿ ಪ್ರಕ್ರತಿ ನೀಡುವ ಪ್ರತ್ಯುತ್ತರವೇ ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಭೂ ಕಂಪ, ಜಲಪ್ರಳಯ ಇತ್ಯಾದಿ. ವಿಜ್ಞಾನವು ಮಾನವ ಲೊಕಕ್ಕೆ ವಿವಿದ ಕೊಡುಗೆಯನ್ನು ನೀಡಿದೆ. ಆದರೆ ಮಾನವನು ತನ್ನ ಅತಿ ಆಸೆಯಿಂದ ಅದನ್ನು ದುರ್ಬಳಕೆ ಮಾಡುತಿದ್ದಾನೆ. ತುಂಬಾ ಆಡಂಬರದ ಜೀವನಶೈಲಿಯನ್ನು ಬಯಸುತ್ತಾನೆ. ಇದರಿಂದಾಗಿ ವಿವಿದ ಅನಗತ್ಯ ವಸ್ತುಗಳನ್ನು ಖರೀದಿಸುತ್ತಾನೆ. ಉದಾಃ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ತಿಕ್ ವಸ್ತುಗಳು ಇತ್ಯಾದಿ. ಇವು ಪ್ರಕೃತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಒಳ್ಳೆಯದೇ ಆದರೂ, ಅದು ಪರಿಸರ ಸ್ನೇಹಿ ಆಗುವ ಬದಲು, ಪರಿಸರ ಮಾರಕವಾಗುತ್ತಿರುವುದು ವಿಪರ್ಯಾಸದ ಸಂಗತಿ. ವಾಹನಗಳಿಂದ ಹಾಗು ಕಾರ್ಖಾನೆಗಳಿಂದ ಹೊರಹೊಮ್ಮುವ ರಾಸಾಯನಿಕ ವಸ್ತುಗಳು ಇಂಗಾಲದ ಡೈ ಆಕ್ಸೈಡ್ ನ್ನು ಹೀರಿ ಜೀವ ಅನಿಲವಾದ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಮರಗಳ ಕೊರತೆ, ಪ್ರಕ್ರತಿಯಲ್ಲಿ ಉಷ್ಣಾಂಶ ಬರಲು ಕಾರಣವಾಗಿದೆ. ಇದರ ಪರಿಣಾಮವಾಗಿ ಹಿಮ ಪ್ರದೇಶಗಳು ಕರಗಿ ಜಲಪ್ರವಾಹವಾಗುತ್ತಿದೆ. ಜಗತ್ತಿನ ವಿವಿದೆಡೆ ಭೂ ಕಂಪಗಳು, ಜಲಪ್ರವಾಹಗಳು, ಅತಿವೃಷ್ಟಿ, ಎಚ್ಚರಿಕೆಯ ಘಟನೆಯನ್ನು ಮೊಳಗಿಸುತ್ತಿದೆಯಾದರು ಮಾನವನು ತನ್ನ ಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಮಾನವ ತನ್ನ ಸಾಧನೆಯಲ್ಲಿ ಪ್ರಗತಿ ಸಾಧಿಸಲೋಸುಗ ಪ್ರಕೃತಿಯೊಂದಿಗೆ ಸದ್ದಿಲ್ಲದೆ ಸಂಘರ್ಷಕ್ಕೆ ಇಳಿದಿದ್ದಾನೆ. ಅವನ ಹೊಸ ಆವಿಷ್ಕಾರಗಳು ಮನುಕುಲದ ಮೇಲೆ, ಪ್ರಾಣಿ, ಪಕ್ಷಿ ಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಮನಸ್ಸಿಗೆ ಬಂದಂತೆ ನಡೆಯುತ್ತಿರುವ ಮಾನವನ ಮೇಲೆ ಪ್ರಕ್ರತಿ ಮುನಿಸು ತಾಳಿ, ಇಡೀ ವಾತಾವರಣವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ವಿಕೋಪಗಳಾಗುತ್ತಿವೆ.